trafficjunky-site-verification" content="v7nnn53nt New Viral Kannada: ಹೈದರಾಬಾದ್ಪ : ಶುವೈದ್ಯೆ ಕೊಲೆ ಪ್ರಕರಣ: ಹೆತ್ತವರ ಮನಮಿಡಿವ ಮಾತುಗಳು

ಹೈದರಾಬಾದ್ಪ : ಶುವೈದ್ಯೆ ಕೊಲೆ ಪ್ರಕರಣ: ಹೆತ್ತವರ ಮನಮಿಡಿವ ಮಾತುಗಳು


ಹೈದರಾಬಾದ್, ಡಿಸೆಂಬರ್ 4: ''ಇದೇ ಕೈಯಿಂದ ಮಗುವನ್ನು ಎತ್ತಿಕೊಂಡಿದ್ದು, ಇದೇ ಕೈಯಿಂದ ಆಕೆಯನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿದ್ದು, ಅಂತ್ಯದಲ್ಲಿ ಈ ಕೈಯಲ್ಲಿ ಆಕೆಯ ಮುಖವನ್ನೂ ಒಮ್ಮೆ ಮುಟ್ಟಿ ಮುದ್ದಿಸಲು ಸಾಧ್ಯವಾಗಲಿಲ್ಲ'' ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

 ''ನನ್ನ ಮಗಳನ್ನು ಕೊಂದ ಪಾಪಿಗಳಿಗೇ ಅಂಥದ್ದೇ ಸಾವು ಬರಲಿ'' ಎಂದು ಪಶುವೈದ್ಯೆ ತಾಯಿ ಆಕ್ರೋಶ ಹೊರಹಾಕಿದ್ದಾರೆ.ಖಾಸಗಿ ಸುದ್ದಿವಾಹಿಸಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನನ್ನ ಮಗಳನ್ನು ಹೇಗೆ ಕೊಂದಿದ್ದಾರೋ ಅವರನ್ನು ಹಾಗೆಯೇ ಕೊಲೆ ಮಾಡಬೇಕು ಎಂದಿದ್ದಾರೆ.

ಕೆಲಸವಿದೆ ಎಂದು ಸ್ಕೂಟಿಯಲ್ಲಿ ಹೋಗಿದ್ದರು, ಅಲ್ಲೊಂದು ಕಡೆ ನಿಲ್ಲಿಸಿ ಅಲ್ಲಿಂದ ಕ್ಯಾಬ್‌ನಲ್ಲಿ ತಾನು ಹೋಗಬೇಕಾದ ಜಾಗಕ್ಕೆ ತಲುಪಿದ್ದರು. ವಾಪಸ್ ಬಂದು ಮತ್ತೆ ಸ್ಕೂಟಿ ಏರಿದಾಗ ಪಂಕ್ಚರ್ ಆಗಿದ್ದು ಗೊತ್ತಾಗಿತ್ತು.



ಆ ಸಂದರ್ಭದಲ್ಲಿ ಮನೆಗೆ ಕರೆ ಮಾಡಿ ಎಲ್ಲಾ ವಿಷಯ ತಿಳಿಸಿದ್ದಳು. ಗಾಡಿಯನ್ನು ಸರಿ ಮಾಡಿಕೊಡುವಂತೆ ಸಹಾಯ ಕೇಳಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಕರೆದೊಯ್ದು ಲಾರಿ ಚಾಲಕ, ಕ್ಲೀನರ್‌ಗಳು ಅತ್ಯಾಚಾರವೆಸಗಿ ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಕಣ್ಣುಮುಚ್ಚಲಾಗುತ್ತಿಲ್ಲ ಮಗಳ ಶವವನ್ನು ನೋಡಿ ಒಂದು ವಾರದಿಂದ ರಾತ್ರಿ ನಿದ್ದೆ ಮಾಡಿಲ್ಲ, ಕಣ್ಣು ಮುಚ್ಚಿದರೆ ಸಾಕು ಆಕೆಯ ನಗು, ಮುಗ್ದ ಮಾತುಗಳೇ ಕಣ್ಣಿಗೆ ಬಂದು ಒತ್ತುತ್ತವೆ. ನಮ್ಮಿಂದ ನಮ್ಮ ಮಗುವನ್ನು ಕಿತ್ತುಕೊಂಡ ಆ ಪಾಪಿಗಳಿಗೆ ಅದೇ ರೀತಿಯ ಶಿಕ್ಷೆಯಾಗಬೇಕು. ಅವರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿ ಎಂದು ವೈದ್ಯೆ ತಂದೆ ಮನವಿ ಮಾಡಿದ್ದಾರೆ. ಪೊಲೀಸರಿಗೆ ಶವ ಸಿಕ್ಕಿದ್ದರೂ ನಮಗೆ ತಿಳಿಸಿದ್ದು ತಡವಾಯ್ತು ಪೊಲೀಸರಿಗೆ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಪೊಲೀಸರಿಗೆ ಮಗಳ ಶವ ಬೆಳಗ್ಗೆ 7.30ರ ಸುಮಾರಿಗೆ ಸಿಕ್ಕಿತ್ತು. ಆದರೂ ನಮಗೆ ಬೆಳಗ್ಗೆ 10 ಗಂಟೆಯವರೆಗೂ ಮಾಹಿತಿ ನೀಡಿರಲಿಲ್ಲ. ಶವದ ಪಕ್ಕ ಬಟ್ಟೆ, ಇನ್ನೂ ಕೆಲವು ವಸ್ತುಗಳು ಸಿಕ್ಕಿದ್ದವು. ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? 

ಮಗಳು ಓದುವುದರಲ್ಲಿ ತುಂಬಾ ಚುರುಕು ಮಗಳು ನಿತ್ಯವೂ 14 ತಾಸು ಓದುತ್ತಿದ್ದಳು, ಓದುವುದರಲ್ಲಿ ತುಂಬಾ ಬುದ್ಧಿವಂತೆಯಾಗಿದ್ದಳು. ಒಂದು ದಿನ ಆಕೆ ತನ್ನ ಕನಸನ್ನು ನನಸಾಗಿಸಿಕೊಂಡಳು. ಒಳ್ಳೆಯ ಉದ್ಯೋಗವೂ ದೊರೆತಿತ್ತು. ಮೂರು ವರ್ಷ ಆಕೆ ಸೇವೆ ಸಲ್ಲಿಸಿದ್ದಳು. ಆದರೆ ಈ ಕ್ರೂರಿಗಳಿಗೆ ಮುದ್ದಿನ ಮಗಳು ಬಲಿಯಾಗಬೇಕಾಯ್ತು ಎಂದು ಹಿಡಿಶಾಪ ಹಾಕಿದರು. ಜನರ ಕೈಗೆ ಕಾನೂನು ನೀಡಬೇಕು ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರೇ ನಿರ್ಧಾರ ತೆಗೆದುಕೊಳ್ಳುವಂತಹ ಕಾನೂನು ರಚನೆಯಾಗಬೇಕು. ಅದಕ್ಕೆ ಸಂವಿಧಾನದಲ್ಲಿ ವಿಶೇಷ ಅವಕಾಶ ಮಾಡಿಕೊಡಬೇಕು. ಆ ರೀತಿ ಅವಕಾಶ ದೊರೆತಿದ್ದರೆ ನನ್ನ ಮಗಳು ಬದುಕಿರುತ್ತಿದ್ದಳೇನೋ ಎಂದು ಹೇಳಿ ಕಣ್ಣೀರು ಹಾಕಿದರು.




No comments:

Post a Comment